ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ -2025 ಇಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೂರು ದಿನಗಳ ಈ ಕ್ರೀಡಾಕೂಟದಲ್ಲಿ 145 ಭಾರತೀಯ ಆಟಗಾರರು ಮತ್ತು 20 ದೇಶಗಳ 105 ಅಂತಾರಾಷ್ಟ್ರೀಯ ಸ್ಪರ್ಧಿಗಳು ಸೇರಿದಂತೆ ಒಟ್ಟು 250 ಪ್ಯಾರಾಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಅವರು 90 ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ, ಇದು ಭಾರತ ಆಯೋಜಿಸಿರುವ ಅತಿದೊಡ್ಡ ಪ್ಯಾರಾ-ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಒಂದಾಗಿದೆ. ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾದ ಪ್ರವೀಣ್ ಕುಮಾರ್, ನವದೀಪ್ ಸಿಂಗ್ ಮತ್ತು ಧರಮ್‌ಬೀರ್ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನ 12 ನೇ ಆವೃತ್ತಿಯ ಮೊದಲ ಚರಣ ಕಳೆದ ತಿಂಗಳು ದುಬೈನಲ್ಲಿ ಆರಂಭಗೊಂಡಿದ್ದು, ಐದು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ 14 ಪದಕಗಳನ್ನು ಗೆದ್ದ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಜುಲೈನಲ್ಲಿ ಜೆಕಿಯಾದ ಓಲೋಮೌಕ್‌ನಲ್ಲಿ ನಡೆಯುವ ಕೊನೆಯ ಚರಣದ ಮೂಲಕ ಸಮಾಪನಗೊಳ್ಳಲಿದೆ.
#LiveDDChandanaNews #DDChandanaNews #DDChandana #DDKannada