ಐಎಎಸ್ ( IAS) , ಐಪಿಎಸ್ (IPS ) ರೀತಿ ಐಎಲ್ ಎಸ್ ( Indian legislature service ) ಏಕೆ ಪ್ರಾರಂಭಿಸಬೇಕು?
ಕನ್ನಡ ವಿರೋಧಿ ಹೇಳಿಕೆ ಕೊಟ್ಟರೂ ಜಯಲಲಿತಾರನ್ನು ವಾಟಾಳ ನಾಗರಾಜ್ ಹಾಗು ಇತರರು ರಕ್ಷಿಸಿದ್ದೇಕೆ?
ಕರ್ನಾಟಕ ವಿಧಾನಮಂಡಲ ಅಧಿವೇಶನಗಳು ಹಳಿ ತಪ್ಪುತ್ತಿರುವುದು ಏಕೆ?
ಶಾಸಕರಿಗೆ ತರಬೇತಿ ಹೇಗೆ ಕೊಡಬೇಕು?
ಮಹದಾಯಿ ನೀರು ಹಂಚಿಕೆ ವಿವಾದ ಪರಿಹರಿಸಲು ಸುಲಭ ಉಪಾಯವೇನು?
ಗೋವಾ ಹಾಗು ಕರ್ನಾಟಕದ ರಾಜಕಾರಿಣಿಗಳ ನಡುವೆ ಇರುವ ವ್ಯತ್ಯಾಸ ಗಳೇನು?
ಗೋವಾ ದಲ್ಲಿ ಜೆಡಿಎಸ್ ವಿಫಲವಾಗಿದ್ದೇಕೆ?
ಗೋವಾದಲ್ಲಿ ಕನ್ನಡಿಗರ ಬದುಕು ಹೇಗಿದೆ ?
ಇನ್ನು ಅನೇಕ ಮಹತ್ತರ ವಿಷಯಗಳನ್ನು ಒಳಗೊಂಡಿರುವ ಪುಸ್ತಕ " ದಿ ಬಬ್ಬಲ್ಸ್ ಆಫ್ ಮೆಮೊರಿ " ಬೆಂಗಳೂರಿನಲ್ಲಿ ಜನವರಿ ೫ ರಂದು ಬಿಡುಗಡೆಯಾಯಿತು.
ಈ ಪುಸ್ತಕವನ್ನು ಬರೆದಿರುವವರು ಟಿ. ನ್. ಧ್ರುವಕುಮಾರ್. ಇವರು ಗೋವಾ ವಿಧಾನ ಸಭೆಯ ಮಾಜಿ ಕಾರ್ಯದರ್ಶಿಗಳು ಹಾಗು ಕರ್ನಾಟಕ ವಿಧಾನ ಸಭಾ ಸಚಿವಾಲಯದ ನಿವೃತ್ತ ಕಾರ್ಯದರ್ಶಿಗಳು.
ತಮ್ಮ ಸುದೀರ್ಘ ಅನುಭವವನ್ನು ೩ ಅಧ್ಯಾಯಗಳಲ್ಲಿ ದಾಖಲಿಸಿ ತಮ್ಮ ಚೊಚ್ಚಲ ಪುಸ್ತಕವನ್ನು ತುಂಬ ಶ್ರದ್ಧೆಯಿಂದ ಮಾಡಿದ್ದಾರೆ.
ಇ-ನಾರದ ನ್ಯೂಸ್ ನೊಂದಿಗೆ ಮನ ಬಿಚ್ಚಿ ಮಾತನಾಡಿ ಧುವಕುಮಾರ್ ಅವರು ತಮ್ಮ ಪುಸ್ತಕದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡರು.
#bookreview #karnataka #goa #enaradanews #ias #ips #ils