ಖಾದಿ ಕುಶಲಕರ್ಮಿಗಳ ಜೀವನಮಟ್ಟವನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಕುಶಲ ಕರ್ಮಿಗಳ ವೇತನವನ್ನು ಶೇಕಡ 20ರಷ್ಟು ಹೆಚ್ಚಿಸಲಾಗುತ್ತಿದೆ ಎಂದು ಖಾದಿ ವಿಲೇಜ್ ಇಂಡಸ್ಟ್ರಿ ಕಮಿಷನ್ ಅಧ್ಯಕ್ಷ ಮನೋಜ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಅವರು, ಪ್ರಸ್ತುತ, ಚರಕದಲ್ಲಿ ನೂಲುವವರು ಪ್ರತಿ ಹ್ಯಾಕ್ ಗೆ 12 ರೂಪಾಯಿ 50 ಪೈಸೆ ಸಂಭಾವನೆ ಪಡೆಯುತ್ತಿದ್ದು, ಇನ್ನು ಮುಂದೆ ಪ್ರತಿ ಹ್ಯಾಕ್ ಗೆ 15 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 11 ವರ್ಷಗಳಲ್ಲೇ ಖಾದಿ ಕುಶಲಕರ್ಮಿಗಳ ವೇತನದಲ್ಲಿ ಇದು ಅತಿ ಹೆಚ್ಚಿನ ವೇತನ ನಿಗದಿಯಾಗಿದೆ ಎಂದು ಹೇಳಿದ್ದಾರೆ.
#LiveDDChandanaNews #DDChandanaNews #DDChandana #DDKannada