Loading...
「ツール」は右上に移動しました。
1いいね 21回再生

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೈನಲ್ - ಭಾರತ ಮತ್ತು ನ್ಯೂಜಿಲೆಂಡ್ ಹಣಾಹಣಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿಂದು ಪ್ರಶಸ್ತಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಹಣಾಹಣಿ ನಡೆಸಲಿವೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಭಾರತೀಯ ಕಾಲಮಾನ 2.30ಕ್ಕೆ ಪಂದ್ಯ ಆರಂಭವಾಗಲಿದೆ.
ಪ್ರಸಕ್ತ ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಕಿವೀಸ್ ಬಳಗ 10-6ರಿಂದ ಮುನ್ನಡೆಯಲಿದೆ. ನಾಕೌಟ್ ಪಂದ್ಯಗಳಲ್ಲಿಯೂ ಕಿವೀಸ್ ಬಳಗ 3-1ರಿಂದ ಮುನ್ನಡೆಯಲಿದೆ.
ಈ ಟೂರ್ನಿಯ ಗುಂಪು ಹಂತಗಳಲ್ಲಿ ಉಭಯ ತಂಡಗಳು 1 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ, ಜಯಗಳಿಸಿತ್ತು.
ಹೈಬ್ರೀಡ್ ಮಾದರಿಯ ಟೂರ್ನಿಯಲ್ಲಿ ಭಾರತ, ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿರುವುದರಿಂದ ಅಂತಿಮ ಪಂದ್ಯವೂ ಭಾರತಕ್ಕೆ ಹೆಚ್ಚು ಅನುಕೂಲಕಾರಿಯಾಗಲಿದೆ ಎನ್ನಲಾಗುತ್ತಿದೆ.
ಭಾರತದ ಸ್ಪೀನ್ ಬೌಲರ್ ಗಳಾದ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಅವರ ಮೇಲೆ ಅಂತಿಮ ಪಂದ್ಯದಲ್ಲಿ ಭಾರತ ಹೆಚ್ಚು ಅವಲಂಬಿತವಾಗಿದೆ.
ನ್ಯೂಜಿಲೆಂಡ್ ತಂಡದಲ್ಲಿಯೂ ಪರಿಣಾಮಕಾರಿ ಸ್ಪೀನರ್ ಗಳಾದ ನಾಯಕ ಸ್ಯಾಂಟನರ್, ಮಿಚ್ಚೆಲ್ ಬ್ರೆಸ್ ವೆಲ್, ರಚಿನ್ ರವೀಂದ್ರ ಮತ್ತು ಗ್ಲೇನ್ ಫಿಲಿಪ್ಸ್ ಅವರ ಮೇಲೆ ಹೆಚ್ಚಿನ ಗಮನ ನೆಟ್ಟಿದೆ.
ಉಭಯ ತಂಡಗಳಲ್ಲೂ ಗೆಲುವಿನ ವಿಶ್ವಾಸವಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿವೆ.
*
ಭಾರತದ ಗೆಲುವಿಗೆ ದೇಶಾದ್ಯಂತ ಜನ ಶುಭ ಹಾರೈಸಿದ್ದಾರೆ.

ಹಲವು ಭಾಗಗಳಲ್ಲಿ ಭಾರತದ ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಹೋಮ-ಹವನಗಳ ಮೊರೆ ಹೋಗಿದ್ದಾರೆ. (11.24)

ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ಮರಳು ಶಿಲ್ಪವನ್ನು ರಚಿಸಿ, ಭಾರತ ತಂಡದ ಗೆಲುವಿಗೆ ಹಾರೈಸಿದ್ದಾರೆ.

#LiveDDChandanaNews #DDChandanaNews #DDChandana #DDKannada