ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ನಿನ್ನೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ನ್ಯಾಯಮೂರ್ತಿಗಳಾದ ವಿ.ಕಾಮೇಶ್ವರ ರಾವ್ ಸುದ್ದಿಗೋಷ್ಠಿ ನಡೆಸಿದರು.
ನ್ಯಾಯಮೂರ್ತಿ ಹರೀಶ್ ಕುಮಾರ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖರು ಉಪಸ್ಥಿತರಿದ್ದರು.
ಬಳಿಕ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್, ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಬಾಕಿ ಇರುವ 2 ಲಕ್ಷ 37 ಸಾವಿರದ 217 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. 39ಲಕ್ಷ 22ಸಾವಿರದ 498 ಆಸ್ತಿ ವಿವಾದ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಒಟ್ಟು 2 ಲಕ್ಷ 345 ಕೋಟಿ ಮೊತ್ತದ ಹಣವನ್ನು ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾಂಪತ್ಯ ಕಲಹ, ಕೌಟುಂಬಿಕ ಹಿಂಸೆ, ಮೋಟರ್ ವೆಹಿಕಲ್ ಹಾಗೂ ಭೂಸ್ವಾಧೀನ ಸೇರಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಅದರಲ್ಲಿ 355 ದಂಪತಿಗೆ ರಾಜೀ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ. 3 ಸಾವಿರದ 279 ಇತರೆ ಪ್ರರಕಣಗಳನ್ನು ಇತ್ಯರ್ಥಪಡಿಸಿ, 105 ಕೋಟಿ ರೂಪಾಯಿ ಹಿಂದಿರುಗಿಸಲಾಗಿದೆ ಎಂದು ತಿಳಿಸಿದರು.
#LiveDDChandanaNews #DDChandanaNews #DDChandana #DDKannada